Rosewood Timber seized : Kodagu Karnataka

14th June Madikeri , Kodagu , Karnataka .Seventeen logs of rosewood were seized from Coffee Estate of one Shri Kiran Kumar , in Palur village falling in Madikeri Range of Kodagu Forest Division .

ದಿನಾಂಕ: 14/06/2021ರಂದು ಮಡಿಕೇರಿ ವಲಯದ ವ್ಯಾಪ್ತಿಗೆ ಬರುವ ಪಾಲೂರು ಗ್ರಾಮದ ಕಿರಣ್ ಕುಮಾರ್ ರವರ ಕುಟುಂಬಸ್ಥರ ಅನುಭವ ಸ್ವಾಧೀನದಲ್ಲಿರುವ ಸರ್ವೆ ನಂಬರ್ 132/3 ರ ಕಾಫಿ ತೋಟದಲ್ಲಿ ಅಕ್ರಮವಾಗಿ ಬೀಟೆ ಮರದ ನಾಟಗಳ ದಾಸ್ತಾನು ಇಟ್ಟಿದ್ದನ್ನು ಅರಣ್ಯಾಧಿಕಾರಿಗಳು ಸ್ವತ್ತು ಸಮೇತ ಪತ್ತೆಹಚ್ಚಿ 17 ನಾಟಗಳನ್ನು ಇಲಾಖಾ ಪರ ವಶಪಡಿಸಿಕೊಂಡು ಅರಣ್ಯ ಮೊಕದ್ದಮೆ ಸಂಖ್ಯೆ 04/2021-22 ದಿನಾಂಕ 14/06/2021 ರಂದು ದಾಖಲಿಸಿ ಸದರಿ ಪ್ರಕರಣದಲ್ಲಿ ಭಾಗಿಯಾದ 1 ನೇ ಆರೋಪಿಯಾದ ರಹೀಮ್- ಪಾಲೂರು ಗ್ರಾಮ ತಲೆಮರೆಸಿಕೊಂಡುಇರುತ್ತಾನೆ, 2 ನೇ ಆರೋಪಿ ಕಿರಣ್ ಕುಮಾರ್ ಮಾಲೂರು ಗ್ರಾಮ ಈತನು ತಲೆಮರೆಸಿಕೊಂಡಿರುತ್ತಾನೆ. ಸದರಿ ಕಾರ್ಯಾಚರಣೆಯಲ್ಲಿಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀ ಶಿವರಾಮ ಬಾಬು ಮತ್ತು ಮಡಿಕೇರಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀ ದಯಾನಂದ ಇವರ ಮಾರ್ಗದರ್ಶನದಲ್ಲಿ ಹಾಗೂ ಶ್ರೀಮತಿ ಸುಮಿತ್ರ ಎಸ್ ವಲಯ ಅರಣ್ಯಾಧಿಕಾರಿ ಮಡಿಕೇರಿ ವಲಯ ಹಾಗೂ ಕಳ್ಳಿ ರ ಎಂ ದೇವಯ್ಯ ವಿರಾಜಪೇಟೆ ವಲಯ ವಲಯಾರಣ್ಯಾಧಿಕಾರಿ ಇವರ ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಉಮೇಶ. ಸಿ ಮಲ್ಲಯ್ಯ ಹಿರೇಮಠ್ , ಸಂಜಿತ್ ಸೋಮಯ್ಯ ದೆಯಂಡ, ಸಚಿನ್ ಬಿ.ಎಚ್ ಮಲ್ಲಿಕಾರ್ಜುನ್ ಅರಣ್ಯ ರಕ್ಷ ಕ ರವಿಕುಮಾರ್ ಮತ್ತು ಆರ್ ಆರ್ ಟಿ ಸಿಬ್ಬಂದಿಗಳಾದ ತಿಮ್ಮಯ್ಯ ಚಂದ್ರ ಡ್ರೈವರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು

Leave a Reply